Deprecated: File class-oembed.php is deprecated since version 5.3.0! Use wp-includes/class-wp-oembed.php instead. in /home/u407462654/domains/starfocustv.com/public_html/wp-includes/functions.php on line 6260
ಮಂಗಳೂರು: ಪಾಲೇಮಾರ್ ನೇತೃತ್ವದ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆ – Star Focus TV

ಮಂಗಳೂರು: ಪಾಲೇಮಾರ್ ನೇತೃತ್ವದ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆ

ಮಂಗಳೂರು: ಪಾಲೇಮಾರ್ ನೇತೃತ್ವದ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆ
ಮಂಗಳೂರು, ಮೇ 23: ಮಂಗಳೂರಿನ ಮೇರಿಹಿಲ್‌ನಲ್ಲಿರುವ ಪಾಲೇಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರ ನೇತೃತ್ವದಲ್ಲಿ ನಿರ್ಮಿಸಲಾದ ನಾಲ್ಕು ಅತ್ಯಾಧುನಿಕ ಸಭಾಭವನಗಳ ಲೋಕಾರ್ಪಣೆ ಸಮಾರಂಭ ಭವ್ಯವಾಗಿ ನಡೆಯಿತು.

ಆಂಧ್ರ ಪ್ರದೇಶ ರಾಜ್ಯಪಾಲ ಜಸ್ಟಿಸ್ ಎಸ್ ಅಬ್ದುಲ್.ನಜಿರ್ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಪಾಲೇಮಾರ್ ಕನ್ವೆನ್ಷನ್ ಸೆಂಟರ್, ನೇತ್ರಾವತಿ ಸಭಾಭವನ, ಪಾಲೇಮಾರ್ ಫಾರ್ಮ್ಸ್ ಹಾಗೂ ಪಾಲೇಮಾರ್ ಗಾರ್ಡನ್ ಸೇರಿದಂತೆ ನಾಲ್ಕು ಸೌಲಭ್ಯಗಳನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ರೈಲ್ವೆ ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಕರ್ನಾಟಕ ವಿಧಾನಸಭೆಯ ಸಭಾಪತಿಯು.ಟಿ.ಖಾದರ್ , ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರೀಜೇಶ್ ಚೌಟಮಂಗಳೂರು ಉತ್ತರ ಶಾಸಕ ಡಾ .ಭರತ್ ಶೆಟ್ಟಿ , ಮೂಡಬಿದ್ರಿ ಶಾಸಕ ಉಮಾನಾಥ್ ಕೋಟ್ಯಾನ್ ಎಂ ಎಲ್ಸಿ ಐವನ್ ಡಿಸೋಜಾ , ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮರುಳ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಸಂಘ-ಸಂಸ್ಥೆಗಳನ್ನು ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ವಿ. ಸೋಮಣ್ಣ “ಪಾಲೇಮಾರ್ ಅವರ ಸಮಾಜಮುಖಿ ಚಿಂತನೆ ಶ್ಲಾಘನೀಯ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ದೃಷ್ಟಿಯಿಂದ ಜಿಲ್ಲೆಗೆ ನಾಲ್ಕು ಸಭಾಭವನಗಳನ್ನು ಸಮರ್ಪಿಸಿದ್ದಾರೆ. ಇದು ದೇಶಕ್ಕೆ ಮಾದರಿಯಾಗುವ ಕಾರ್ಯ” ಎಂದು ಹೇಳಿದರು.

ಸಭಾಪತಿ ಯು.ಟಿ.ಖಾದರ್ ಮಾತನಾಡಿ, “ಪಾಲೇಮಾರ್ ಅವರು ಯುವಜನತೆಗೆ ಮಾದರಿಯಾಗಿದ್ದಾರೆ. ಮುಂದೆ ಅವರ ಜೀವನ ಚರಿತ್ರೆ ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕು” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಪಾಲ ರಾಜ್ಯಪಾಲ ಜಸ್ಟಿಸ್ ಎಸ್. ಅಬ್ದುಲ್ ನಜಿರ್ ಅವರು , “ಪಾಲೇಮಾರ್ ಕನ್ವೆನ್ಷನ್ ಸೆಂಟರ್ ಸೇರಿದಂತೆ ಎಲ್ಲ ಸಭಾಂಗಣಗಳ ಉದ್ಘಾಟನೆ ಮಾಡಲು ಸಂತೋಷವಾಗುತ್ತಿದೆ. ಶಿಕ್ಷಣ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಪಾಲೇಮಾರ್ ಅವರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ.

ಇವರ ಬಹುಮುಖ ಪ್ರತಿಭೆ ಕುರಿತು ಜೀವನ ಚರಿತ್ರೆ ಪ್ರಕಟವಾಗಬೇಕು” ಎಂದು ಹೇಳಿದರು.ಇದೇ ವೇಳೆ ಸಭಾಂಗಣದಲ್ಲಿ ಎಲ್ಲ ಜಾತಿ ವರ್ಗ ಗಳ ಕಾರ್ಯಕ್ರಮಗಳು ನಡೆಯಲಿದ್ದು ಸರ್ವ ಧರ್ಮ ಸಮನ್ವ್ಯಯ ನಡೆಯಲಿದೆ ಜೊತೆಗೆ “ಪಾಲೇಮಾರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುವ ಮದುವೆಗಳು ಖಂಡಿತವಾಗಿಯೂ ಸಂತೋಷಕರ ಜೀವನಕ್ಕೆ ಕಾರಣವಾಗಲಿ” ಎಂದು ಹಾರೈಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಕದ್ರಿ ನವನೀತ್ ಶೆಟ್ಟಿ ನೆರವೇರಿಸಿದರು.

[wonderplugin_carousel id="2"]

Poll 

आप अपने सहर के वर्तमान बिधायक के कार्यों से कितना संतुष्ट है ?

View Results

Loading ... Loading ...


Related Articles