Deprecated: htmlspecialchars(): Passing null to parameter #1 ($string) of type string is deprecated in /home/u407462654/domains/starfocustv.com/public_html/wp-includes/formatting.php on line 4802

ಸೋದೆ ಪರ್ಯಾಯ 2028-30 ಬಾಳೆ ಮುಹೂರ್ತ

ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿ ಪ್ರಥಮ ಮುಹೂರ್ತ
ಶ್ರೀಮನ್ಮಧ್ವಾಚಾರ್ಯರ ಸಹೋದರರಾದ ಶ್ರೀ ವಿಷ್ಣುತೀರ್ಥರ ಪರಂಪರೆಯಲ್ಲಿ ಬಂದಂತಹ ಸೋದೆ ಶ್ರೀ ವಾದಿರಾಜ ಮಠದ ಯತಿಶ್ರೇಷ್ಠರಾದ ಶ್ರೀ ವಾದಿರಾಜತೀರ್ಥ ಶ್ರೀಪಾದರು, ಉಡುಪಿಯ ಅಷ್ಟಮಠಗಳ ಪರ್ಯಾಯ ವ್ಯವಸ್ಥೆಗೆ ವಿಶಿಷ್ಟವಾದ ರೂಪುರೇಷೆಗಳನ್ನು ನೀಡಿದ ಮಹಾನ್ ಸಂತರು.

ಈ ಪರ್ಯಾಯ ಪರಂಪರೆಯ ಪೂರ್ವಭಾವಿ ಸಿದ್ಧತೆಗಳಲ್ಲಿ ಬಾಳೆ ಮುಹೂರ್ತವು ತನ್ನದೇ ಆದ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಮಹತ್ವವನ್ನು ಹೊಂದಿದೆ.
ಸೋದೆ ಶ್ರೀ ವಾದಿರಾಜ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ಎರಡನೇ ಶ್ರೀಕೃಷ್ಣ ಪೂಜಾ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳ ಅಂಗವಾಗಿ ನಡೆಯುವ ಪ್ರಥಮ ಮುಹೂರ್ತವಾದ ಬಾಳೆ ಮುಹೂರ್ತವು ಇದೇ ತಿಂಗಳ 29 ರಂದು ಬೆಳಿಗ್ಗೆ 7:45 ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ ನೆರವೇರಲಿದೆ.
ಈ ಧಾರ್ಮಿಕ ಆಚರಣೆಯು ಬೆಳಿಗ್ಗೆ 6:30 ಕ್ಕೆ ಸೋದೆ ಮಠದ ಪಟ್ಟದ ದೇವರ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆನಂತರ ಶ್ರೀಚಂದ್ರೇಶ್ವರ, ಅನಂತೇಶ್ವರ ದೇವರ ಹಾಗೂ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಫಲಾನ್ಯಾಸ ಪೂರ್ವಕ ಪ್ರಾರ್ಥಿಸಿ 7:45 ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಸೋದೆ ಮಠದ ಆವರಣದಲ್ಲಿರುವ ತೋಟದಲ್ಲಿ ಬಾಳೆ ಗಿಡ , ಕಬ್ಬಿನ ಗಿಡ, ತುಳಸಿ ಗಿಡ ನೆಡುವುದರ ಮೂಲಕ ಬಾಳೆ ಮುಹೂರ್ತ ನೆರವೇರಲಿದೆ.
ಈ ಶುಭ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಪಾದರೊಂದಿಗೆ ಮಠದ ದಿವಾನರು, ಆಸ್ಥಾನ ವಿದ್ವಾಂಸರು, ಪಂಡಿತರು, ಭಕ್ತಾದಿಗಳು ಹಾಗೂ ಗಣ್ಯರು ಉಪಸ್ಥಿತರಿರಲಿದ್ದಾರೆ.

Deprecated: htmlspecialchars(): Passing null to parameter #1 ($string) of type string is deprecated in /home/u407462654/domains/starfocustv.com/public_html/wp-includes/formatting.php on line 4802

Deprecated: htmlspecialchars(): Passing null to parameter #1 ($string) of type string is deprecated in /home/u407462654/domains/starfocustv.com/public_html/wp-includes/formatting.php on line 4802

Related Articles