ಕುಂದಾಪುರ ಗುಡ್ಡೆಂಗಡಿ-ಮೊಳಹಳ್ಳಿ ಯಲ್ಲಿ SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಉದ್ಘಾಟನೆ.ಗ್ರಾಮೀಣ ಯುವ ಜನರಿಗೆ ಉದ್ಯೋಗದ ಹೊಸ ದಾರಿ*

 

ಕುಂದಾಪುರ: ಕುಂದಾಪುರ ತಾಲೂಕಿನ ಗುಡ್ಡೆಂಗಡಿ, ಯಡ್ಯಾಡಿ-ಮತ್ಯಾಡಿ ಪರಿಸರದ ಗ್ರಾಮೀಣ ಯುವಕ-ಯುವತಿಯರಿಗೆ ತಾಂತ್ರಿಕ ಹಾಗೂ ಕೌಶಲ್ಯಾಧಾರಿತ ತರಬೇತಿ ನೀಡಲು ಸ್ಥಾಪಿಸಲಾದ _SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್_ ಮೇ 25ರಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ ಹಾಗೂ SKF Elixer India Pvt. Ltd., ಮೂಡಬಿದ್ರಿ ಇವರ ಜಂಟಿ ಸಹಯೋಗದಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಿದೆ.

 

ಡಾ. ಜಿ. ರಾಮಕೃಷ್ಣ ಆಚಾರ್, ಅಧ್ಯಕ್ಷರು, ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಚೇರ್ಮನ್, SKF ಎಲಿಕ್ಸರ್ ಇಂಡಿಯಾ ಪ್ರೈ.ಲಿ._ ಅವರು ಪ್ರಸ್ತಾವಿಕವಾಗಿ ಮಾತನಾಡಿ _”ನಾನು ಹುಟ್ಟಿ ಬೆಳೆದ್ದು ಇದೇ ಗುಡ್ಡೆಂಗಡಿಯಲ್ಲಿ. ತಾಂತ್ರಿಕ ತರಬೇತಿ ಹಾಗೂ ಪರಿಶ್ರಮದಿಂದ ಇಂದು ಜಾಗತಿಕ ಮಟ್ಟದ ಉದ್ಯಮ ಕಟ್ಟಿದ್ದೇನೆ

. ನಮ್ಮ ಗ್ರಾಮದ ಮಕ್ಕಳು ಅವಕಾಶಗಳಿಗಾಗಿ ಕಾಯಬಾರದು, ಅವಕಾಶ ಸೃಷ್ಟಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಈ ಕೇಂದ್ರದಲ್ಲಿ ನೀಡುವ ತರಬೇತಿ ಸಂಪೂರ್ಣ ಕೌಶಲ್ಯಾಧಾರಿತವಾಗಿದ್ದು, 3 ತಿಂಗಳ ಇಂಟರ್ನ್‌ಶಿಪ್ ಮೂಲಕ ನೈಜ ಕೈಗಾರಿಕಾ ಅನುಭವ ನೀಡಲಾಗುವುದು.

ಇದು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿ ಉದ್ಯೋಗಾವಕಾಶಗಳನ್ನು ಸುಲಭಗೊಳಿಸುತ್ತದೆ”_ ಎಂದು ತಿಳಿಸಿದರು.ಇಂದಿನ ದಿನಗಳಲ್ಲಿ ಕೌಶಲ್ಯ ತರಬೇತಿ ಯುವಜನರ ಅಗತ್ಯತೆ ಇದ್ದು, ತುಂಬಾ ಯುವಜನತೆ ಇಂದು ಕೌಶಲ್ಯ ತರಬೇತಿ ಪಡೆದು ಮುಂದುವರೆದರೆ ಉತ್ತಮ ಉದ್ಯೋಗ ಅವಕಾಶ ದೊರೆಯಲಿದೆ,ಜೊತೆಗೆ ವಿದೇಶದಲ್ಲೂ ತುಂಬ ಅವಕಾಶಗಳಿವೆ.

ಈ ನಿಟ್ಟಿನಲ್ಲಿ ತಾವು ತಮ್ಮ ಹುಟ್ಟೂರಿಗೆ ಏನಾದರೂ ಕೊಡುಗೆ ನೀಡಬೇಕು ಅನ್ನುವ ನಿಟ್ಟಿನಲ್ಲಿ SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಅನ್ನು ಸ್ಥಾಪಿಸಿದ್ದು ಇದೊಂದು ಉಚಿತ ತರಬೇತಿಯಾಗಿದೆ.ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೇಳಿಕೊಂಡರು.

ಉದ್ಘಾಟನೆ: ಸಮಾರಂಭವನ್ನು _ಡಾ. ಎಮ್. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಎಜುಕೇಶನ್ ಫೌಂಡೇಶನ್, ಮೂಡಬಿದಿರೆ_ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಡಾ. ಜಿ. ರಾಮಕೃಷ್ಣ ಆಚಾರ್ ಅವರು ಮತ್ತು ತಾವು ಜೊತೆಯಲ್ಲಿ ಮೂಡುಬಿದಿರೆಗೆ ಆಗಮಿಸಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದು, ಮುಂದೆ ತಾವು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರೆದು, ಆಚಾರ್ ಅವರು ಮುಂದುವರೆದ ತಮ್ಮ ವೃತ್ತಿ ಜೀವನದ ಕೈಗಾರಿಕ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿ,ಯಶಸ್ಸು ಸಾಧಿಸಿದರು.ಜೊತೆಗೆ ವಿದೇಶದಲ್ಲೂ ತಮ್ಮ ಉದ್ದಿಮೆಯನ್ನು ವಿಸ್ತರಿಸಿದರು.

ಈ ಮಧ್ಯೆ ತಾವು ಹುಟ್ಟಿ ಬೆಳೆದ ಊರಿಗೆ ಏನಾದರೂ ಸಹಾಯ ಮಾಡಬೇಕು ಅನ್ನುವ ದೃಷ್ಟಿಯನ್ನು ಮುಂದಿಟ್ಟು, ಯುವ ಜನರಿಗೆ ಕೌಶಲ್ಯ ಭರಿತ ತರಬೇತಿ ನೀಡುವ ಮೂಲಕ, ಸ್ವಗ್ರಾಮದ ಯುವ ಜನರಿಗೆ ಉಚಿತ ತರಬೇತಿ ನೀಡುವುದಲ್ಲದೆ, ಉದ್ಯೋಗ ಅವಕಾಶ ವನ್ನು ದೊರಕಿಸುವ ಭರವಸೆಯನ್ನು ಸಹ ನೀಡಿದ್ದಾರೆ.

ಪರಿಸರದ ಜನತೆ ಈ ಕೌಶಲ್ಯ ತರಬೇತಿ ಕೇಂದ್ರದ ಸದುಪಯೋಗವನ್ನು ಪಡೆದು ಕೊಳ್ಳಬೇಕೆಂದು ಮನವಿ ಮಾಡಿದರು.

ಸಮಾರಂಭದಲ್ಲಿ ಅತಿಥಿಗಳಾಗಿ
_ಶ್ರೀ ಕಿರಣ್ ಕುಮಾರ್ ಕೋಡಿ ಶಾಸಕರು, ಕುಂದಾಪುರ_, _ಶ್ರೀ ಎಮ್. ದಿನೇಶ್ ಹೆಗ್ಡೆ, ಉದ್ಯಮಿಗಳು, ಮೊಳಹಳ್ಳಿ_, _ಡಾ. ಸುಧಾಕರ್ ಶೆಟ್ಟಿ, ಚೇರ್ಮನ್, ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್, ಕಾರ್ಕಳ_, _CA ಎಸ್.ಎಸ್. ನಾಯಕ್, ಲೆಕ್ಕ ಪರಿಶೋಧಕರು, ಮಂಗಳೂರು_, _ಶ್ರೀ ಬಿ. ಆರುಣ್ ಕುಮಾರ್ ಹೆಗ್ಡೆ, ಪ್ರಥಮ ದರ್ಜೆ ಗುತ್ತಿಗೆದಾರರು, ಯಡ್ಯಾಡಿ ಮತ್ಯಾಡಿ_, _ಶ್ರೀ ಚಂದ್ರಶೇಖರ್ ಶೆಟ್ಟಿ, ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್, ಮೊಳಹಳ್ಳಿ_, ಡಾ. ರಮೇಶ್ ಶೆಟ್ಟಿ, ಚೇರ್ಮನ್, ಸುಜ್ಞಾನ ಎಜುಕೇಶನ್ ಟ್ರಸ್ಟ್, ಕುಂದಾಪುರ_ ಉಪಸ್ಥಿತರಿದ್ದರು.ಸ್ಥಳೀಯ ಮುಖಂಡರು, ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿದರು. ಕೇಂದ್ರಕ್ಕೆ ಶುಭ ಹಾರೈಸಿದರು.


ಕೇಂದ್ರದ ವಿಶೇಷತೆಗಳು:*
ITES, ಮುಂಬೈ ಮಾನ್ಯತೆ ಪಡೆದ ಕೇಂದ್ರದಲ್ಲಿ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಫಿಟ್ಟಿಂಗ್ & ವೆಲ್ಡಿಂಗ್, ಮೆಕ್ಯಾನಿಕ್-ರಿಫ್ರಿಜರೇಶನ್, ಏರ್ ಕಂಡೀಷನಿಂಗ್ & ಪ್ಲಂಬಿಂಗ್ ಕೋರ್ಸ್‌ಗಳು ಪ್ರಾರಂಭವಾಗಿವೆ. ಮಹಿಳೆಯರಿಗಾಗಿ ವಿಶೇಷವಾಗಿ ಫ್ಯಾಷನ್ ಡಿಸೈನಿಂಗ್, ಟೈಲರಿಂಗ್, ಎಂಬ್ರಾಯ್ಡರಿ, ಪ್ಯಾಟರ್ನ್ ಮೇಕಿಂಗ್ ತರಬೇತಿ ನೀಡಲಾಗುವುದು. ಪ್ರತಿ ಬ್ಯಾಚ್‌ಗೆ 20 ವಿದ್ಯಾರ್ಥಿಗಳ ಮಿತಿ, ವೈಯಕ್ತಿಕ ಮಾರ್ಗದರ್ಶನ, ನೈಜ ಕೈಗಾರಿಕಾ ವಾತಾವರಣದಲ್ಲಿ ಕಲಿಕೆ ಇರಲಿದೆ.

ತರಬೇತಿ ಬಳಿಕ SKF Elixer India Pvt. Ltd. ನಲ್ಲಿ ಇಂಟರ್ನ್‌ಶಿಪ್, ಭಾರತ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ವಿದೇಶಿ ಉದ್ಯೋಗಾವಕಾಶದ ಮಾರ್ಗದರ್ಶನ ನೀಡಲಾಗುತ್ತದೆ.

ವೇದಿಕೆಯಲ್ಲಿ _ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ, ಗೌರವ ಟ್ರಸ್ಟಿ, ಡಾ. ಜಿ. ರಾಮಕೃಷ್ಣ ಆಚಾರ್ ಚಾರಿಟೆಬಲ್ ಟ್ರಸ್ಟ್_ ಹಾಗೂ _ಎ. ಬಾಲಕೃಷ್ಣ, ತಾಂತ್ರಿಕ ಸಲಹೆಗಾರರು, SKF ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್_ ಉಪಸ್ಥಿತರಿದ್ದರು.

*ಸಂಪರ್ಕ:* 9187492550
*ಸ್ಥಳ:* ಗುಡ್ಡೆಂಗಡಿ, ಯಡ್ಯಾಡಿ – ಮತ್ಯಾಡಿ ಪೋಸ್ಟ್, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ – 576222

 


Poll 

आप अपने सहर के वर्तमान बिधायक के कार्यों से कितना संतुष्ट है ?

View Results

Loading ... Loading ...


Related Articles