ಮಂಗಳೂರು: ಬಜಪೆ ಠಾಣಾ ವ್ಯಾಪ್ತಿಯಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿರುವ (MSEZ)ಮೀನು ಸಂಸ್ಕರಣ ಫ್ಯಾಕ್ಟರಿಯೊಂದರಲ್ಲಿ ರವಿವಾರ ಸಂಜೆ ದುರಂತ ಸಂಭವಿಸಿದ್ದು ಮೂವರು ಸಾವನ್ನಪ್ಪಿ ಐವರು ಗಂಭೀರ ಗಾಯಗೊಂಡ ಘಟನೆ ಸಂಜೆ 7 ಗಂಟೆಗೆ ನಡೆದಿದೆ.
ವಿವಿಧೆಡೆಗಳಿಂದ ಬರುವ ಮೀನುಗಳನ್ನು ಶುದ್ದೀಕರಿಸುವ ಬೃಹತ್ ಟ್ಯಾಂಕಿಗೆ ಇಳಿದ ಪಶ್ಚಿಮ ಬಂಗಾಲದ ಮೂವರು ಕಾರ್ಮಿಕರು ಮೃತಪಟ್ಟರೆ ಇತರ 5ಮಂದಿ ಗಂಭೀರ ಸ್ಥಿತಿಯಲ್ಲಿ ನಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಒಟ್ಟು ಸಂಸ್ಕರಣ ಘಟಕಕ್ಕೆ ರಕ್ಷಣೆ ನಡೆಸಲು ಎಂಟು ಮಂದಿ ಇಳಿದಿದ್ದು ಅವರಲ್ಲಿ ಮೂವರು ಅಪಾಯದಿಂದ ಪಾರಾಗಿದ್ದಾರೆ. ಮೃತಪಟ್ಟ ಕಾರ್ಮಿಕರನ್ನು ಪ. ಬಂಗಾಳ ದ ನಿಜಾಮುದ್ದಿನ್ (19), ಉಮರ್ ಫಾರೂಕ್ ಮತ್ತು ಸಮೀವುಲ್ಲಾ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಶರಪ ತಲಿ, ಮೀರಾದುಲ್ಲಾ ಇಸ್ಲಾಂ ಎಂದು ಗುರುತಿಸಲಾಗಿದೆ. ಹಸನ್ ಅಲಿ, ಮೊಹಮ್ಮದ್ ಕರಿಮುಲ್ಲಾ ಮತ್ತು ಅಭಿದುಲಾ ಮಲಿಕ್ ಅಪಾಯದಿಂದ ಪಾರಾದ ಕಾರ್ಮಿಕರಾಗಿದ್ದಾರೆ.
ಇವರು ಎಂದಿನಂತೆ ಮೀನು ಶುದ್ದೀಕರಣಗೊಳಿಸುವ ಟ್ಯಾಂಕಿಗೆ ಇಳಿದು,8 ಮಂದಿ ಕಾರ್ಮಿಕರು ಸ್ವಚ್ಛಗೊಳಿಸಿದ ಮೀನನ್ನು ತೆಗೆಯುವ ಸಂದರ್ಭ ಈ ದುರಂತ ಸಂಭವಿಸಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಪಣಂಬೂರು ಮತ್ತು ಬಜಪೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೀನು ಸಂಸ್ಕರಣ ಫ್ಯಾಕ್ಟರಿಯನ್ನು ಇದೀಗ ಬಂದ್ ಮಾಡಲಾಗಿದೆ.ನಗರದ ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು ನಂತರ ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.