ಬೆಳಗಾವಿ: ಹುಬ್ಬಳಿಯ ಜಿಲ್ಲಾಪಂಚಾಯತ್ ಸದಸ್ಯನ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಶನಿವಾರ ಇಲ್ಲಿಯ ಹಿಂಡಲಗಾ ಜೈಲಿನಿಂದ ಬಿಡುಗಡೆ ಆಗಿದ್ದು, ಈ ಸಂಧರ್ಭ ಅಭಿಮಾನಿಗಳು, ಬೆಂಬಲಿಗರು ಸೇಬು ಹಾರ ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು.
ಜಾಮೀನು ಸಿಕ್ಕರೂ ಎರಡು ದಿನಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕ ವಿನಯ್ ಕುಲಕರ್ಣಿ ಅವರನ್ನು ಅತ್ಯಂತ ಸಂಭ್ರಮದಿಂದ ಸ್ವಾಗತಿಸಲಾಯಿತು.
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ವಿನಯ ಪರ ಜಯಘೋಷ ಕೂಗಿದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಒಂದು ಗಂಟೆಯಿಂದ ಜೈಲಿನ ಹೊರ ಭಾಗದಲ್ಲಿ ಕಾಯುತ್ತ ನಿಂತು ವಿನಯ ಹೊರ ಬರುತ್ತಿದ್ದಂತೆ ಅವರಿಗೆ ರಾಖಿ ಕಟ್ಟಿ ಅಣ್ಣನನ್ನು ಸ್ವಾಗತಿಸಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದರು.
In individuals with pulmonary hypertension, these ottomax + arteries come to be tightened, making it challenging for blood to stream through them.