Deprecated: File class-oembed.php is deprecated since version 5.3.0! Use wp-includes/class-wp-oembed.php instead. in /home/u407462654/domains/starfocustv.com/public_html/wp-includes/functions.php on line 6260
ಮಂಗಳೂರಿನಲ್ಲಿ ಇಟಲಿಯ ಎಂಐ ಆರ್ ಗ್ರೂಪ್ ಉತ್ಪಾದನಾ ಘಟಕದ ಭೂಮಿ ಪೂಜೆ – Star Focus TV

ಮಂಗಳೂರಿನಲ್ಲಿ ಇಟಲಿಯ ಎಂಐ ಆರ್ ಗ್ರೂಪ್ ಉತ್ಪಾದನಾ ಘಟಕದ ಭೂಮಿ ಪೂಜೆ

ಮಂಗಳೂರು:ಇಂದು ನಗರದ ಮಂಗಳೂರಿನ ಎಂ ಎಸ್ ಈ ಝೆಡ್ ಕೈಗಾರಿಕಾ ಪ್ರದೇಶದಲ್ಲಿ ಇಟಲಿಯ ಎಂಐ ಆರ್ ಗ್ರೂಪ್ ತನ್ನ ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲು ಭೂಮಿ ಪೂಜೆ ಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅತಿವಂದನೀಯ ಡಾ. ಪೀಟರ್ ಪೌಲ್ ಸಲ್ದಾನ ನೆರವೇರಿಸಿ ಆಶೀರ್ವದಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸತತ ಪ್ರಯತ್ನ ದಿಂದ ಇಂದು ಎಂಐ ಆರ್ ಗ್ರೂಪ್ , ಜಿಲ್ಲೆಯಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಮಂಗಳೂರಿನಲ್ಲಿ ಕಾರ್ಯಾಚರಿಸಲು ಚಾಲನೆ ನೀಡಿದೆ.

ಇಲ್ಲಿ ಕಟ್ಟಡ ನಿರ್ಮಾಣ ನಡೆದು ಉತ್ಪಾದನೆ ಮಾಡುವವರೆಗೆ ನಮ್ಮೆಲ್ಲರ ಸಹಕಾರ ವಿದೆ. ಇದರ ಹಾಗೆಯೆ ಮುಂದೆ ಇನ್ನಷ್ಟು ಕಂಪೆನಿ ಜಿಲ್ಲೆಗೆ ಬರಲು ಪ್ರೇರೇಪಣೆಯಾಗಲಿ ಇಂತಹ ಬೃಹತ್ ಉದ್ಯಮಗಳು ಜಿಲ್ಲೆಗೆ ಬಂದು ನಮ್ಮ ಜಿಲ್ಲೆಯ ಜನರಿಗೆ ಉದ್ಯೋಗ ದೊರೆಯಲಿ ಎಂದು ಆಶಿಸಿದರು.


ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ ನಮ್ಮೂರಿನ ಮಗ ಇಟಲಿಯ ಕಂಪನಿಯನ್ನು ಜಿಲ್ಲೆಯಲ್ಲಿ ಸ್ಥಾಪಿಸಲು ಬಯಸಿದಕ್ಕೆ ಅಭಿನಂದನೆಗಳು, ಜೊತೆಗೆ ನಮ್ಮ ಜಿಲ್ಲೆ ಗೆ ಇದನ್ನು ಬರಲು ಶ್ರಮಿಸಿದ ಸಂಸದರಿಗೂ ಅಭಿನಂದನೆಗಳು ಎಂದರು , ಎಂ ಐ ಆರ್ ಗ್ರೂಪ್ಸ
ಸಿಇಒ ಆರ್ಕಿಟೆಕ್ಟ್ ರಫೇಲೆ ಮರಾಝೂ ,

ಮಾತನಾಡಿ ನಮಗೂ ಸಂತೋಷವಾಗುತ್ತಿದೆ ಅದರಲ್ಲೂ ಭಾರತದಲ್ಲಿ ಪ್ರಪಥಮ ಬಾರಿಗೆ ನಮ್ಮ ಸಂಸ್ಥೆ ಕಾರ್ಯಾಚರಿಸಲು ಅವಕಾಶ ನೀಡಿದಕ್ಕೂ ಸಂಸದರ ಸಹಿತ ಎಲ್ಲರಿಗು ಅಭಿನಂದನೆಗಳು ಎಂದರು. ಎಂ ಐ ಆರ್ ಗ್ರೂಪ್ ಕಾರ್ಯ ನಿರ್ವಾಹಕ ನಿರ್ದೇಶಕ ನಿತಿಕ್ ರತ್ನಾಕರ್,ಇಮ್ಮಾನುಯೆಲ್ ಪಿನಾ, ಗಜ್ಮೆಂಡ್ ಲುಜಿ, ಸುನಜೆ, ಪ್ರಮೋದ್ ಪಿಂಟೋ ಕಮರ್ಷಿಯಲ್ ಡೈರೆಕ್ಟರ್,ಸೂರ್ಯ ನಾರಾಯಣ್ ಸಿಇಓ ಎಂ ಎಸ್ ಈ ಝೆಡ್,ಸುನಿಲ್ ಆಚಾರ್ , ಸಂಜಯ್ ಪ್ರಭು, ರತ್ನಾಕರ್ ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.

[wonderplugin_carousel id="2"]

Poll 

आप अपने सहर के वर्तमान बिधायक के कार्यों से कितना संतुष्ट है ?

View Results

Loading ... Loading ...


Related Articles