
ಡಾ. ಎನ್ ವಿನಯ ಹೆಗ್ಡೆ ಅವರ ಜನ್ಮ ವಾರ್ಷಿಕೋತ್ಸವದ ಅಮೃತ ಮಹೋತ್ಸವದ ನಿಮಿತ್ತ ನಡೆದ ಸಂವಾದ
ಮಂಗಳೂರು;ಡಾ. ಎನ್ ವಿನಯ ಹೆಗ್ಡೆ ಅವರ ಜನ್ಮ ವಾರ್ಷಿಕೋತ್ಸವದ ಅಮೃತ ಮಹೋತ್ಸವದ ನಿಮಿತ್ತ ನಡೆದ ಸಂವಾದ ಕಾರ್ಯಕ್ರಮ ಏಪ್ರಿಲ್ 3, 2026 ಶುಕ್ರವಾರದಂದು ಮಂಗಳೂರು ರಾಮಕೃಷ್ಣ ಮಠದ ಅಮೃತ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹ್ಯಾಂಗೊ ಐಸ್ ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್ನ ಎಂ.ಡಿ ಶ್ರೀ ಪ್ರದೀಪ್ ಜಿ ಪೈ, ಮತ್ತು ಯೆನೆಪೋಯಾ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್ ಶ್ರೀ ಮೊಹಮ್ಮದ್ ಫರ್ಹಾದ್,
ನಿಟ್ಟೆ ವಿಶ್ವವಿದ್ಯಾಲಯದ ಶ್ರೀ ಎನ್. ವಿಶಾಲ್ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಮತ್ತು ಆಳ್ವಾಸ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದರು.ಸಮಾರಂಭದಲ್ಲಿ
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಪೂಜ್ಯ ಸ್ವಾಮಿ ಜಿತಕಾಮನಂದಜಿ ಮಹಾರಾಜ್ ಅವರು ಮಾತನಾಡುತ್ತಾ ನಿಟ್ಟೆ ವಿನಯ ಹೆಗಡೆ ಅವರ ಜೀವನ ಚರಿತ್ರೆ, ಪಠ್ಯಕ್ರಮ ರೀತಿಯಲ್ಲಿ ಪ್ರಕಟವಾಗಿ ಮುಂದಿನ ಪೀಳಿಗೆಗೆ ಅವರು ಬದುಕಿದ ಶೈಲಿ ತಿಳಿಯಬೇಕೆಂದು ಈ ಸಂಧರ್ಭದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ರಂಜನ್ ಬೆಳ್ಳರ್ಪಾಡಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದಿಲ್ ರಾಜ್ ಆಳ್ವಾ,ಉಪಸ್ಥಿತರಿದ್ದರು. ಸಂತೋಷ ಆಳ್ವಾ ಕಾರ್ಯಕ್ರಮ ನಿರ್ವಹಿಸಿದರು
.ಸಾಮಾಜಿಕ ಉದ್ಯಮಶೀಲತೆ ಕುರಿತಾದ ಸಂವಾದ ಕಾರ್ಯಕ್ರಮದಲ್ಲಿ ಯೆನೆಪೋಯಾ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್ ಶ್ರೀ ಮೊಹಮ್ಮದ್ ಫರ್ಹಾದ್,ಮತ್ತು ಗಣೇಶ್ ಕಾರ್ಣಿಕ್,ಮಾತನಾಡಿದರು. ಸಂವಹನಕಾರರಾಗಿ ರಂಜನ್ ಬೆಳ್ಳರ್ಪಾಡಿ ನಿರ್ವಹಿಸಿದರು.










