ಮುಖಾಮುಖಿ ವೇಳೆ ವಿಕ್ರಂ ಗೌಡ ಶರಣಾಗತಿಗೆ ಸೂಚನೆ. ಆಗ ಪೊಲೀಸರ ಮೇಲೆ ವಿಕ್ರಂ ದಾಳಿ.ಪ್ರತಿ ದಾಳಿಯಲ್ಲಿ ವಿಕ್ರಂ ಗೌಡ ಸಾವು.

ಎಎನ್ ಎಫ್ ಕೂಂಬಿಂಗ್ ವೇಳೆ ಮುಖಾಮುಖಿಯಾದ ನಕ್ಸಲ್ ರಿಗೆ ಶರಣಾಗತಿಗೆ ಸೂಚಿಸಿದ್ದರೂ ದಾಳಿ ನಡೆಸಿದ್ದು, ಪ್ರತಿದಾಳಿಯಲ್ಲಿ ಮೋಸ್ಟ್ ವಾಂಟೆದ್ ನಕ್ಸಲ್ ನಾಯಕ ವಿಕ್ರಂ ಗೌಡ ಸಾವನಪ್ಪಿದ್ದಾರೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ  ಐಜಿಪಿ ರೂಪಾ.ಡಿ. ತಿಳಿಸಿದ್ದಾರೆ.

ಮಂಗಳವಾರ ಎನ್‌ಕೌಂಟರ್‌ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಿಕ್ರಂ ಗೌಡ ವಿರುದ್ದ ಕೇರಳದಲ್ಲಿ 19 ಸೇರಿದಂತೆ ಕೊಲೆ ಸುಲಿಗೆ ಸಂಬಂಧ ಒಟ್ಟು 61 ಪ್ರಕರಣಗಳು ದಾಖಲಾಗಿವೆ. ನಕ್ಸಲ್‌ ನಿಗ್ರಹ ಪಡೆ ಈ ಕಾರ್ಯಾಚರಣೆ ‌ನಡೆಸಿದೆ‌.

ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಅರಣ್ಯದಲ್ಲಿ ಸತತ 10 ದಿನಗಳಿಂದ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ನ‌.10ರಿಂದ ನಿರಂತರ ಪ್ರಯತ್ನ ಜಾರಿಯಲ್ಲಿತ್ತು. ನಕ್ಸಲರ ಬಗ್ಗೆ ಮಾಹಿತೆ ಕಲೆ ಹಾಕಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದೇವೆʼ ಎಂದರು.

ಕೂಂಬಿಂಗ್ ವೇಳೆ ನಕ್ಸಲರ ತಂಡ ಎದುರಾಗಿದ್ದು, ಈ ವೇಳೆ ಶರಣಾಗತಿಗೆ ಸೂಚಿಸಿದ್ದಾರೆ. ಆದರೆ ಅವರು ದಾಳಿ ಪ್ರಾರಂಭಿಸಿದರು, ಈ ವೇಳೆ ಎಎನ್ಎಫ್ ತಂಡ ಪ್ರತಿದಾಳಿ ನಡೆಸಿದೆ. ಈ ದಾಳಿಯಲ್ಲಿ ವಿಕ್ರಂ ಗೌಡ ಸಾವನಪ್ಪಿದ್ದಾರೆ ಎಂದರು. ಎಎನ್‌ಎಫ್ 2005 ಮೇ ತಿಂಗಳಿನಲ್ಲಿ ಸ್ಥಾಪನೆಗೊಂಡಿದ್ದು, ಆ ಬಳಿಕ ನಡೆದ ನಾಲ್ಕನೇ ಎನ್‌ಕೌಂಟರ್ ಇದಾಗಿದೆ. ವಿಕ್ರಂ ಗೌಡ ಜತೆಗೆ ಇನ್ನು ಐದಾರು ಮಂದಿ ಇದ್ದಾರೆ. ಅವರು ಹೇಗೆ ಮುಂದೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕೂಂಬಿಂಗ್ ಕಾರ್ಯಾಚರಣೆ ಮುಂದೆ ಕೂಡಾ ನಿರಂತರವಾಗಿ ಮುಂದುವರಿಯುತ್ತದೆʼ  ಈ ಕಾರ್ಯಾಚರಣೆ ಗೆ ಬೆಂಗಳೂರಿನ ಕೆ‌ಎಸ್‌ಐಎಸ್‌ಎಫ್ ನ 75 ಮತ್ತು ಶಿವಮೊಗ್ಗದಿಂದ 25 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ವಿಕ್ರಂ ಗೌಡ ನಕ್ಸಲರ ಕಬಾನಿ ದಳಂ 2 ಎಂಬ ತಂಡವನ್ನು ಮುನ್ನಡೆಸುತ್ತಿದ್ದ.

 


Poll 

आप अपने सहर के वर्तमान बिधायक के कार्यों से कितना संतुष्ट है ?

View Results

Loading ... Loading ...


Related Articles