ಮಂಗಳೂರು ಕಂಬಳ ಸಮಿತಿ ವತಿಯಿಂದ ಮಂಗಳೂರು ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ರಾಮ- ಲಕ್ಷ್ಮಣ ಜೋಡುಕರೆಯಲ್ಲಿ 7ನೇ ವರ್ಷದ ಹೊನಲು ಬೆಳಕಿನ ಮಂಗಳೂರು ಕಂಬಳ ವಿಜೃಂಭಣೆಯಿಂದ ನಡೆಯಿತು.
ಕಂಬಳ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಕಂಬಳವನ್ನು ವೀಕ್ಷಿಸಬೇಕು ಎಂದು ಇತ್ತೀಚಿನ ದಿನಗಳಲ್ಲಿ ನಾಡಿನ ಹಲವು ಭಾಗದ ಜನರು ಆಸೆ ವ್ಯಕ್ತಪಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಂಬಳವನ್ನು ಇಡೀ ದೇಶಕ್ಕೆ ಪರಿಚಯ ಮಾಡುವ ಕೆಲಸ ಆಗಲಿ ಎಂದರು.
ಕಂಬಳ ಎನ್ನುವುದು ತುಳುನಾಡಿನ ಸಾಂಸ್ಕೃತಿಕ ವೈಭವವಾಗಿದ್ದು, ಇತ್ತೀಚಿನ ದಿನಗಳಲ್ಲಿ ಆಧುನಿಕ
ಸ್ಪರ್ಶ ನೀಡುವ ಮೂಲಕ ಇಡೀ ದೇಶಕ್ಕೆ ಕಂಬಳವನ್ನು ಪರಿಚಯಿಸುವ ಕೆಲಸ ಶ್ಲಾಘನೀಯವಾಗಿದೆ. ತುಳು ಭಾಷೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಇಂತಹ ಸುಂದರ
ಭಾಷೆ ಕರುನಾಡಿನ ಅವಿಭಾಜ್ಯ ಅಂಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎಂದರು.
ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಈಗಾಗಲೇ ಕಂಬಳ ಬೆಂಗಳೂರಿಗೆ ಹೋಗಿದೆ. ಇನ್ನು ಮುಂದೆ ದೆಹಲಿಗೂ ತಲುಪಬೇಕು. ಅ ಮೂಲಕ ಕಂಬಳಕ್ಕೆ ಜಗತ್ತಿನ ಮಾನ್ಯತೆ ಸಿಗಬೇಕು. ಹಿಂದು ಸಂಸ್ಕೃತಿಗೆ ಶ್ರೇಯಸ್ಸು ದೊರೆಯಲಿ ಎಂದರು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜಿ ಆಶೀರ್ವಚನ ನೀಡಿ, ಭೂಮಿ ಮತ್ತು ಪರಿಸರವನ್ನು ಪೂಜಿಸುವ ನಮ್ಮ ಸಂಸ್ಕೃತಿಯ ಒಂದು ಭಾಗವೇ ಕಂಬಳ ಆಗಿದೆ. ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಅದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಆಗಬೇಕಾಗಿದೆ ಎಂದರು.
ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ದೀಪ ಪ್ರಜ್ವಲನೆ ಮಾಡಿದರು. ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಿ, ನಮ್ಮ ನೆಲದ ಸಂಸ್ಕೃತಿಯನ್ನು ಪರಿಚಯ ಮಾಡುವ ವೇದಿಕೆಯೇ ಕಂಬಳ ಕ್ರೀಡೆಯಾಗಿದೆ ಎಂದರು.
ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಚೌಟ ಮಾತನಾಡಿ, ಕಂಬಳವನ್ನು ನಿಷೇಸುವ ಸಂದರ್ಭದಲ್ಲಿ ಕಂಬಳವನ್ನು ಉಳಿಸಲು ಹೋರಾಟ ಹಮ್ಮಿಕೊಂಡ ವೇಳೆ ನಾವೆಲ್ಲರೂ ಭಾಗಿಯಾಗಿದ್ದೆವು. ಆ ಸಂದರ್ಭದಲ್ಲಿ ಸೇರಿದ್ದ ಯುವಕರು ನಿರ್ಣಯ ತೆಗೆದುಕೊಂಡು ನಮ್ಮ ಸಂಸ್ಕೃತಿ ಉಳಿಸುವ ಮತ್ತು ಪರಿಚಯಿಸುವ ದೃಷ್ಟಿಯಿಂದ ಮಂಗಳೂರಿನಲ್ಲಿ ಕಂಬಳ ನಡೆಸಲು ನಿರ್ಧರಿಸಿದೆವು.
ಈ ಸಂದರ್ಭದಲ್ಲಿ ಎಂಆರ್ಜಿ ಗ್ರೂಪ್ನ ಪ್ರಕಾಶ್ ಶೆಟ್ಟಿ ಅವರು ಕಂಬಳ ನಡೆಸಲು ವಿಶಾಲವಾದ ಜಾಗವನ್ನು ಒದಗಿಸಿ, ಕಾರ್ಯಕ್ರಮ ನಡೆಸಲು ಸಹಕಾರ ನೀಡಿದ್ದಾರೆ ಎಂದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ
ಅನಂತಪದ್ಮನಾಭ ಅಸ್ರಣ್ಣ, ಶಾಸಕ ಡಾ.ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಕುಡುಂಬೂರು ಗುತ್ತು ಗುತ್ತಿನ ಜಯರಾಮ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಹೊಸದಿಗಂತ ಮಂಗಳೂರು ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ, ಹಿರಿಯ ಜಾಹೀರಾತು ವ್ಯವಸ್ಥಾಪಕ ದೇವದಾಸ ರೈ ಮೇನಾಲ, ಆಶಿಕ್ ಉಳ್ಳಾಲ್, ತುಳು ಸಾಹಿತ್ಯ ಆಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ನವನೀತ ಶೆಟ್ಟಿ ಕದ್ರಿ, ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಅನಿಲ್ ಕುಮಾರ್, ಸಮಿತಿ ಗೌರವ ಸಲಹೆಗಾರ ಪ್ರಸಾದ್ ಶೆಟ್ಟಿ, ಕೊಡೆತ್ತೂರಿನ ಶ್ರೀ ಅರಸು ಕುಂಜರಾಯ ದೈವಸ್ಥಾನದ ಜಯರಾಮ ಮುಕಾಲ್ತಿ, ಪ್ರಮುಖರಾದ ಪುಷ್ಪರಾಜ್ ಚೌಟ, ಪ್ರದೀಪ್ ಆಳ್ವ, ರಾಜೇಶ್ ಶೆಟ್ಟಿ, ಭಾಗ್ಯದಯ ಶೆಟ್ಟಿ, ಲೋಕೇಶ್ ಶೆಟ್ಟಿ ಮುಳ್ಳೂರು, ಅರುಣ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ವಿಜಯಕುಮಾರ್ ಕಂಗಿನಮನೆ, ರಾಘವೇಂದ್ರ ಹೊಳ್ಳ, ದೇವಿಪ್ರಸಾದ್ ಶೆಟ್ಟಿ, ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್, ಸಂಚಾಲಕ ಸಾಂತ್ಯಗುತ್ತು ಸಚಿನ್ ಶೆಟ್ಟಿ, ತಲಪಾಡಿ ದೊಡ್ಡಮನೆ ಪ್ರೀತಮ್ ರೈ ಮೊದಲಾದವರಿದ್ದರು. ಸುಮಾರು 160ಕ್ಕೂ ಹೆಚ್ಚು ಜೋಡಿ ಕೋಣಗಳು ಮಂಗಳೂರು ಕಂಬಳದಲ್ಲಿ ಭಾಗವಹಿಸಿವೆ. ಭಾನುವಾರ ಬೆಳಗ್ಗೆ ಕಂಬಳ ಸಮಾರೋಪಗೊಂಡಿತು.
ಬಂಗ್ರಕೂಳೂರು, ಮಂಗಳೂರು “ರಾಮ – ಲಕ್ಷ್ಮಣ” ಜೋಡುಕರೆ ಕಂಬಳ ಕೂಟದ ಫಲಿತಾoಶ
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :
ಕನೆಹಲಗೆ: 08 ಜೊತೆ
ಅಡ್ಡಹಲಗೆ: 04 ಜೊತೆ
ಹಗ್ಗ ಹಿರಿಯ: 22 ಜೊತೆ
ನೇಗಿಲು ಹಿರಿಯ: 29 ಜೊತೆ
ಹಗ್ಗ ಕಿರಿಯ: 26 ಜೊತೆ
ನೇಗಿಲು ಕಿರಿಯ: 81 ಜೊತೆ
ಒಟ್ಟು ಕೋಣಗಳ ಸಂಖ್ಯೆ: 170 ಜೊತೆ
••••••••••••••••••••••••••••••••••••••••••••••
ಕನೆಹಲಗೆ:
( ನೀರು ನೋಡಿ ಬಹುಮಾನ )
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಬೈಂದೂರು ಮಹೇಶ್ ಪೂಜಾರಿ
ದ್ವಿತೀಯ: ಬೇಲಾಡಿ ಬಾವ ಅಶೋಕ್ ಶೆಟ್ಟಿ
ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ
••••••••••••••••••••••••••••••••••••••••••••••
ಅಡ್ಡ ಹಲಗೆ:
ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
ದ್ವಿತೀಯ: ಮಂಗಳೂರು ಕಂಬಳಾಭಿಮಾನಿ ವಕೀಲ ವೃಂದ
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
••••••••••••••••••••••••••••••••••••••••••••••
ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಎ”
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ “ಸಿ”
ಓಡಿಸಿದವರು: ಕಾವೂರು ದೋಟ ಸುದರ್ಶನ್
••••••••••••••••••••••••••••••••••••••••••••••
ಹಗ್ಗ ಕಿರಿಯ:
ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗಿಶ್ ಪೂಜಾರಿ
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ: ಸಾಲಿಗ್ರಾಮ ಕಾರ್ಕಡ ಪುಟ್ಟು ಹೊಳ್ಳರಮನೆ ನಟರಾಜ್ ಹೊಳ್ಳ
ಓಡಿಸಿದವರು: ಪಣಪೀಲ ಪ್ರವೀಣ್ ಕೋಟ್ಯಾನ್
••••••••••••••••••••••••••••••••••••••••••••••
ನೇಗಿಲು ಹಿರಿಯ:
ಪ್ರಥಮ: ಬೋಳದಗುತ್ತು ಸತೀಶ್ ಶೆಟ್ಟಿ “ಬಿ”
ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
ದ್ವಿತೀಯ: ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ “ಎ”
ಓಡಿಸಿದವರು: ಬೈಂದೂರು ಮಂಜುನಾಥ ಗೌಡ
••••••••••••••••••••••••••••••••••••••••••••••
ನೇಗಿಲು ಕಿರಿಯ:
ಪ್ರಥಮ: ಕಟೀಲು ಕಿನ್ನಿಗೋಳಿ ಪ್ರಖ್ಯಾತ್ ಪ್ರಣೀತ್ ಶೆಟ್ಟಿ
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ: ಮೂಡುಬೆಳ್ಳೆ ಜವನೆರ್
ಓಡಿಸಿದವರು: ಹೀರೆಬೆಟ್ಟು ಪ್ರದೀಪ್