ಸೋದೆ ಮಠದ ಯತಿಪರಂಪರೆಯಲ್ಲಿ ಶ್ರೇಷ್ಠರಾದ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ವರಪ್ರಸಾದ ಹಾಗೂ ಔಷಧೀಯ ಗುಣವುಳ್ಳ ಮಟ್ಟು ಗುಳ್ಳ ಬೆಳೆಯನ್ನು ನಿರಂತರ ಪೋಷಿಸಿ – ಬೆಳೆಸುವ ನಿಟ್ಟಿನಲ್ಲಿ ತಾ. 01-11-2023 ರಂದು ಸೋದೆ ಮಠದ ವತಿಯಿಂದಲೇ
ನಾಗಪಾತ್ರಿ ಮಟ್ಟು ಶ್ರೀ ಲಕ್ಷ್ಮಣ ರಾವ್ ಅವರ ಗದ್ದೆಯಲ್ಲಿ ಮಟ್ಟು ಗುಳ್ಳ ಬೆಳೆಯನ್ನು ಬೆಳೆದು ಮಟ್ಟು ಗ್ರಾಮದ ರೈತರನ್ನು ಪ್ರೋತ್ಸಾಹಿಸುವ ಮುಖೇನ ಸೋದೆ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಮತ್ತು ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಜೊತೆಗೂಡಿ 2023 ನೇ ಸಾಲಿನ ಮಟ್ಟು ಗುಳ್ಳ ಬೆಳೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದಿವಾನರಾದ ಶ್ರೀನಿವಾಸ ತಂತ್ರಿಗಳು, ಹರೀಶ್ ಜೋಷಿ, ಅಜಯ್ ಶೆಟ್ಟಿ ಹಾಗೂ ಮಟ್ಟು ಗುಳ್ಳ ಬೆಳೆಗಾರರ ಸಂಘದ ಸದಸ್ಯರು ಹಾಗೂ ಮಟ್ಟು ಗ್ರಾಮದ ರೈತರು ಉಪಸ್ಥಿತರಿದ್ದರು.