ಚುನಾವಣೆಗಾಗಿ ಎಲ್ಲಾ ಅರ್ಹ ಪದವೀಧರ ಹಾಗೂ ಶಿಕ್ಷಕರನ್ನು ಸೇರ್ಪಡೆಗೊಳಿಸಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ. ಈ ನಿಟ್ಟಿನಲ್ಲಿ ಸರಕಾರಿ ಅಧಿಕಾರಿಗಳಿಂದ ಹೆಚ್ಚಾಗಿ ರಾಜಕೀಯ ಪಕ್ಷಗಳು ಹೆಚ್ಚು ಚುರುಕಾಗಿ ಕೆಲಸ ಮಾಡಬೇಕಾಗಿದೆ. ಹೊಸದಾಗಿಯೇ ಮತದಾರರ ಪಟ್ಟಿ ರಚನೆಯಾಗುವುದರಿಂದ ಎಲ್ಲರು ಮತ್ತೆ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ನೊಂದಾವಣೆ ಮಾಡಬೇಕಾಗಿದೆ. 01-11-2023 ಕ್ಕಿಂತ ಮೂರು ವರ್ಷಗಳ ಪೂರ್ವದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪದವೀಧರರಾಗಿರಬೇಕು ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಯಂ ಶಿಕ್ಷಕರಾಗಿ ಕನಿಷ್ಠ ಮೂರು ವರ್ಷ ಬೋಧನೆ ಮಾಡಿರಬೇಕು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ನಮೂನೆ 19 ರಲ್ಲಿ ಹಾಗೂ ಪದವಿಧರರಿಗೆ ಸಂಬAಧಿಸಿದAತೆ ನಮೂನೆ 18 ರಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ತಾಲೂಕು ಕಚೇರಿಯ ಚುನಾವಣೆ ಶಾಖೆಗೆ ತಲುಪಿಸಬೇಕು.ಶಿಕ್ಷಕರ ಆಯಾಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಶಿಕ್ಷಕರ ದೃಢೀಕರಣ ಮಾಡಿಸಿ ನಮೂನೆ 19 ರಲ್ಲಿ ಅರ್ಜಿ ಭರ್ತಿ ಮಾಡಬೇಕು ಮತ್ತು ಪದವಿಧರರು ಕಡ್ಡಾಯವಾಗಿ ತಾವು ಉತೀರ್ಣವಾಗಿರುವ ಅಂಕಪಟ್ಟಿ,ಪದವಿ ಪ್ರಮಾಣಪತ್ರ ಅಥವಾ ಪ್ರಾವಿಜನಲ್ ಪ್ರಮಾಣಪತ್ರವನ್ನು ಜಿಲ್ಲೆಯ ಪತ್ರಾಂಕಿತ ಅಧಿಕಾರಿ ಅಥವಾ ನೋಟವರಿಯವರಿಂದ ದೃಢೀಕರಣ ಮಾಡಿಸಿ ನಮೂನೆ 18 ರಲ್ಲಿ ಅರ್ಜಿ ಭರ್ತಿ ಮಾಡಿ ಚುನಾವಣೆ ಶಾಖೆಗೆ ಕಳುಹಿಸಬೇಕು.ಅರ್ಜಿ ಸಲ್ಲಿಸಲು 6-11-2023 ಕೊನೆ ದಿನಾಂಕವಾಗಿರುತ್ತದೆ.

ನೈರುತ್ಯ ಶಿಕ್ಷಕರ ಕ್ಷೇತ್ರ ಜಿಲ್ಲೆಗಳು ಯಾವುವು

ನೈರುತ್ಯ ಶಿಕ್ಷಕರ ಕ್ಷೇತ್ರ ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲೂಕುಗಳನ್ನು ಒಳಗೊಂಡಿದೆ. ಈ ಕ್ಷೇತ್ರವನ್ನು ಈ ಹಿಂದೆ ಬಿಜೆಪಿಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅವರು ಪ್ರತಿನಿಧಿಸುತ್ತಿದ್ದರು. ಅನಂತರ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳದ ಬೋಜೇ ಗೌಡರು ಶಾಸಕರಾದರು.

2020ರ ನ.1ರ ಮೊದಲು ಪದವಿ ಪಡೆದ ಭಾರತೀಯ ಪ್ರಜೆ ಹಾಗೂ ನೈರುತ್ಯ ಪದವಿ, ಶಿಕ್ಷಕ ಕ್ಷೇತ್ರದ ನಿವಾಸಿಯಾಗಿರಬೇಕು. ಫೋಟೋ, ಆಧಾರ್ ಕಾರ್ಡ್ ಪ್ರತಿ, ಪದವಿ ಪೂರೈಸಿರುವ ಮಾರ್ಕ್ಸ್ ಕಾರ್ಡ್ ಮತ್ತು ಪದವಿ ಪ್ರಮಾಣಪತ್ರ, ಎಲ್ಲ ದಾಖಲೆಗಳಲ್ಲೂ ಸ್ವಯಂಘೋಷಿತ ಸಹಿ, ವೋಟರ್ ಐಡಿ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ನಮೂನೆ 19ರ ಮೂಲಕ ನೈರುತ್ಯ ಶಿಕ್ಷಕರ ಕ್ಷೇತ್ರದ ಮತದಾರರನ್ನಾಗಿ ಅರ್ಜಿ ಸಲ್ಲಿಸಲು 2023ರ ನ.1ಕ್ಕೆ ಅನ್ವಯವಾಗುವಂತೆ ಕನಿಷ್ಠ 3 ವರ್ಷ(ಕಳೆದ 6ವರ್ಷಗಳಲ್ಲಿ) ಬೋಧನಾ ವೃತ್ತಿ ಕೈಗೊಂಡಿರಬೇಕು (ಶಿಕ್ಷಕ ವೃತ್ತಿಯನ್ನು ಆರಂಭಿಸಿ ಮೂರು ವರ್ಷ ಪೂರೈಸಿರುವವರು). ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ತಾನು ಹಿಂದಿನ ಆರು ವರ್ಷಗಳಲ್ಲಿ ಒಟ್ಟು ಮೂರು ವರ್ಷಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಕುರಿತು ಅರ್ಜಿಯೊಂದಿಗೆ ಪ್ರಮಾಣಪತ್ರವನ್ನು ಲಗತ್ತಿಸಬೇಕು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ನೋಂದಾವಣೆಗಾಗಿ ಪುತ್ತೂರಿನ ಉಲ್ಲಾಸ್ ಕೋಟ್ಯಾನ್ ಅವರನ್ನು ಸಂಯೋಜಕರಾಗಿ ನೇಮಕ ಮಾಡಲಾಗಿದೆ. ಅವರ ಸಂಪರ್ಕ ದೂರವಾಣಿ ನಂಬರ್ 9972419022ಇಂತಿದೆ. ಡಾ.ಯು.ಟಿ. ಇಫ್ತಿಕಾರ್ ಸಂಪರ್ಕ ಸಂಖ್ಯೆ8197911591