ಸಮಾಜದ ಎಲ್ಲರನ್ನೂ ತಲುಪುವ ಸಹಕಾರಿ ಕ್ಷೇತ್ರ.ಡಾ.ಎಂಎನ್ಆರ್ ಅನಿಸಿಕೆ.
ಮಂಗಳೂರು ಮಂಗಳೂರು ಜೆಪ್ಪು ಮೋರ್ಗನ್ಗೇಟ್ನ ‘ಶ್ರೀ ಲಕ್ಷಣಾನಂದ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಮತ್ತು ಬೆಳ್ಳಿಹಬ್ಬದ ಸಂಭ್ರಮಾಚರಣೆ ಸಮಾರಂಭ ಭಾನುವಾರ ನಡೆಯಿತು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಶ್ರೀ ಲಕ್ಷಣಾನಂದ ವಿವಿಧೋದ್ದೇಶ ಸಹಕಾರ ಸಂಘ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಆಟೋರಿಕ್ಷಾ ಚಾಲಕರ ಸಹಿತ ಸಮಾಜದ ತಳವರ್ಗದ ಜನರಿಗೆ ಸಾಲ ಸೌಲಭ್ಯ ನೀಡಿ ಅವರ ಸ್ವಾವಲಂಬಿ ಬದುಕಿಗೆ ಕಾರಣವಾಗಿರುವುದು ಶ್ಲಾಘನೀಯ ಎಂದರು.
ಸಮಾಜದ ಎಲ್ಲರನ್ನೂ ತಲುಪಲು ಇರುವ ವ್ಯವಸ್ಥೆ ಸಹಕಾರಿ ಕ್ಷೇತ್ರವಾಗಿದೆ. ವಾಣಿಜ್ಯ ಬ್ಯಾಂಕ್ ಗಳು ವಿಲೀನಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ. ಸಹಕಾರಿ ಸಂಘಗಳು ಬೆಳೆಯುತ್ತಿದ್ದು,ಶಾಖೆಗಳನ್ನು ವಿಸ್ತರಿಸುತ್ತಿವೆ.
ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಸದಸ್ಯರು ತಮ್ಮ ಶೇ.20 ಲಾಭಾಂಶವನ್ನು ಸಂಘಕ್ಕೆ ನೀಡಿರುವುದು.
ಶ್ಲಾಘನೀಯ, ರಾಮಕ್ಷತ್ರಿಯ ಸಮಾಜದ ಮೂಲಕ ಅಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ನೇತೃತ್ವದಲ್ಲಿ ಈ ಸಂಘ ಇನ್ನಷ್ಟು ಉನ್ನತಿಯತ್ತ ಸಾಗಲಿ ಎಂದರು.
ನಿಟ್ಟೆ ವಿಶ್ವವಿದ್ಯಾಲಯ ಸಹ ಕುಲಪತಿ ಡಾ. ಶಾಂತಾರಾಮ ಶೆಟ್ಟಿ ಮಾತನಾಡಿ, ಶ್ರೀ ಲಕ್ಷ್ಮಣಾನಂದ ಸಂಘ ಅಭಿವೃದ್ದಿ ಹೊಂದಲಿ ಎಂದರು.ಸಂಘ ಈಗಾಗಲೆ ಐದು ಶಾಖೆಗಳನ್ನು ಹೊಂದಿದ್ದು,ಹೊಸದಾಗಿ ಐದು ಶಾಖೆ ಆರಂಭಿಸಲಾಗುವುದು.
ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ ಸಾವಿರಾರು ಮಂದಿಗೆ ಸಹಾಯ ಮಾಡಿರುವುದು ಸ್ತುತ್ಯರ್ಹ. ಈ ಸಂಘದ ಮೂಲಕ ಸಾವಿರಾರು ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿರುವುದು ಹೆಮ್ಮೆಯ ಸಂಗತಿ. ಭವಿಷ್ಯದಲ್ಲಿ ಸಂಘ ಇನ್ನಷ್ಟು ಶಾಖೆಗಳನ್ನು ಸ್ಥಾಪಿಸಲು ಎಂದರು.
ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ
ಸಂಘದ ಅಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಜಯಾನಂದ
ಅಂಚನ್, ಮಾಜಿ ಶಾಸಕ ಜೆ.ಆರ್. ಲೋಬೊ, ಕಾರ್ಪೋರೇಟರ್ ಭಾನುಮತಿ ಪಿ.ಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ.ಎ., ನಿರ್ದೇಶಕರಾದ ರಾಮಚಂದ್ರ ಕೆ.ಎಸ್. ಪಿ. ಬಾಬು, ಡಾ.ಜೆ. ರವೀಂದ್ರ, ಕೆ.ಎಸ್. ರಂಜನ್, ವಾರಿಜ ಕೆ., ಡಾ.ಎಚ್. ಪ್ರಭಾಕರ್, ಡಾ. ಮಂಜುಳಾ ವಿ.ರಾವ್, ಕೆ.ರವೀಂದ್ರ, ಜೈರಾಜ್ ಕೆ. ಹಾಗೂ ಯೋಗೀಶ್ ಕುಮಾರ್, ಚಿಪ್ಪು ಇದ್ದರು. ಸಂಘದ ಉಪಾಧ್ಯಕ್ಷ ಕೆ.ದಿನೇಶ್ ರಾವ್ ಸ್ವಾಗತಿಸಿದರು. ನಿರ್ದೇಶಕ ಜೆ.ಕೆ. ರಾವ್ ವಂದಿಸಿದರು.ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆ ಮತ್ತು ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಸಂಘದ ಅಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ಅವರನ್ನು ಸನ್ಮಾನಿಸಲಾಯಿತು.ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ವಿವಿಧೋದ್ದೇಶ ಸಹಕಾರ ಸಂಘ ಕಳೆದ 25 ವರ್ಷಗಳಲ್ಲಿ ಉಜ್ವಲವಾಗಿ ಬೆಳೆದು ಅತ್ಯುತ್ತಮ ವ್ಯವಹಾರ ನಡೆಸಿ 2500ಕ್ಕೂ ಅಧಿಕ ಮಂದಿ ರಿಕ್ಷಾ ಚಾಲಕರಿಗೆ ಸಾಲ ನೀಡಿ ರಿಕ್ಷಾದ ಮಾಲೀಕರಾಗುವಂತೆ ಮಾಡಿದೆ.
ಜನಸಾಮಾನ್ಯರು, ಉದ್ದಿಮೆದಾರರಿಗೆ ಸಾಲ ನೀಡಿ ಸ್ವಾವಲಂಬಿ ಬದುಕಿಗೆ ಕಾರಣವಾಗಿದೆ.ಕೃಷ್ಣ ಜೆ.ಪಾಲೆಮಾರ್ ಅಧ್ಯಕ್ಷ.
.